ಅಮೆರಿಕದೊಡನೆ ರಾಜಿ

(1775)ನೆಯ ಮಾರ್ಚ್ (22)ರಂದು ಕಾಮನ್ಸ್ ಸಭೆಯಲ್ಲಿ ಇಂಗ್ಲಿಷ್ ವಾಗ್ಮಿ ಬರ್ಕ್ ಮಾಡಿದ ಭಾಷಣದ ಶಿರೋನಾಮ (ಕನ್ಸಿಲಿಯೇಷನ್ ವಿತ್ ಅಮೆರಿಕ). ಅಮೆರಿಕದ ವಸಾಹತುಗಳಿಗೂ ಬ್ರಿಟನ್ನಿಗೂ ಮನಸ್ತಾಪ ಒದಗಿದಾಗ ಇದಕ್ಕೆ ಶಾಂತಿಯುತವಾದ ಪರಿಹಾರವನ್ನು ಕಂಡು ಹಿಡಿಯಲು ಬರ್ಕ್ ಮಾಡಿದ ಕಟ್ಟಕಡೆಯ ಪ್ರಯತ್ನವಿದು. ವಸಾಹತುಗಾರರ ನಿಲುವಿನಲ್ಲಿದ್ದ ನ್ಯಾಯವನ್ನು ಬರ್ಕ್ ಗುರುತಿಸಿದ. ಇದು ಅವನ ಉಜ್ವಲ ಭಾಷಣಗಳಲ್ಲೊಂದು. `ರಾಜಕೀಯದಲ್ಲಿ ಹಲವು ವೇಳೆ ಉದಾತ್ತತೆಯೇ ನಿಜವಾದ ವಿವೇಕ; ಮಹಾಸಾಮ್ರಾಜ್ಯ. ಅಲ್ಪ ಮನಸ್ಸುಗಳು ಪರಸ್ಪರ ಹೊಂದಿಕೊಳ್ಳಲಾರವು ಎಂದು ಈ ಭಾಷಣದಲ್ಲಿ ಆತ ಸಾರಿದ. ಆದರೆ ಅವನ ಎಚ್ಚರಿಕೆ ಮತ್ತು ಮಾರ್ಗದರ್ಶನ ವ್ಯರ್ಥವಾದುವು. 		
   
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ